ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಒಂದು ಭಾರತೀಯ ಹಣಕಾಸು ನಿಗಮವಾಗಿದೆ. ಇದೆ ದೇಶದ ಚಿನ್ನದ ಸಾಲ ಎನ್‌ಬಿಎಫ಼್‌ಸಿ ಆಗಿದೆ. ಚಿನ್ನದ ಸಾಲಗಳಿಗೆ ಹಣಕಾಸು ಒದಗಿಸುವುದರ ಜೊತೆಗೆ ಕಂಪನಿಯು ಇತರ ರೀತಿಯ ಸಾಲಗಳು, ವಿಮೆ ಮತ್ತು ಹಣ ವರ್ಗಾವಣೆ ಸೇವೆಗಳನ್ನು ನೀಡುತ್ತದೆ. ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಕಂಪನಿಯು ಕೇರಳದ ಕೊಚ್ಚಿಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಇದು ದೇಶಾದ್ಯಂತ ೫೦೦೦ ಶಾಖೆಗಳನ್ನು ನಿರ್ವಹಿಸುತ್ತದೆ. ಮುತ್ತೂಟ್ ಫೈನಾನ್ಸ್ ಅನ್ನು ಯುಕೆ, ಯುಎಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸಹ ಸ್ಥಾಪಿಸಲಾಗಿದೆ. == ಕಾರ್ಪೊರೇಟ್ ಹಿನ್ನೆಲೆ == ಮಾರ್ಚ್ ೧೪ ೧೯೯೭ ರಂದು ಮಥಾಯ್ ಜಾರ್ಜ್ ಮುತ್ತೂಟ್ ಅವರು ಮುತ್ತೂಟ್ ಫೈನಾನ್ಸ್ ಅನ್ನು ಸಂಸ್ಥಾಪಿಸಿದರು. ೨೦೦೯- ೧೦ ರ ಅವಧಿಯಲ್ಲಿ ಕಂಪನಿಯು ೬೨೦ ಹೊಸ ಶಾಖೆಗಳನ್ನು ಸೇರಿಸಿತು. ಸಾರ್ವಜನಿಕ ಠೇವಣಿಗಳನ್ನು ಸ್ವೀಕರಿಸದೆಯೇ ನಾನ್-ಬ್ಯಾ೦ಕಿ೦ಗ್ ಕ೦ಪೆನಿ ಫೈನಾನ್ಸಿ‌ಯಲ್ ಕ೦ಪನಿಯಾಗಿ ಇದು ಕಾರ್ಯ ನಿರ್ವಹಿಸುತ್ತದೆ. == ಪ್ರಶಸ್ತಿಗಳು == ೨೦೧೩ ರಲ್ಲಿ ಸ್ಕೋಚ್ ಫೈನಾನ್ಸಿ‌ಯಲ್ ಇನ್‌ಕ್ಲೂಷನ್ ಅವಾರ್ಡ್. ೨೦೧೨ ರಲ್ಲಿ ಬೆಸ್ಟ್ ರೂರಲ್ ಔಟ್‌ರೀಚ್‌ಗಾಗಿ ಏಷ್ಯನ್ ಸಸ್ಟೈನಬಿಲಿಟಿ ಲೀಡರ್‌ಶಿಪ್ ಅವಾರ್ಡ್. ೨೦೧೨ ರಲ್ಲಿ ದುಬೈನಲ್ಲಿ ನಡೆದ ಏಷ್ಯನ್ ಲೀಡರ್‌ಶಿಪ್ ಅವಾರ್ಡ್ಸ್‌ನಲ್ಲಿ ಬಿಎಸ್‌ಎಫ಼್‌ಐ ಪ್ರಶಸ್ತಿ. ದುಬೈ ಗ್ಲೋಬಲ್ ಕನ್ವೆನ್ಷನ್ ೨೦೧೨ ರಲ್ಲಿ ಸಾಮಾಜಿಕ ಜವಾಬ್ದಾರಿಯ ೭ ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಹಣಕಾಸು ಸೇವಾ ವಲಯದಲ್ಲಿ ಮುತ್ತೂಟ್ ಫೈನಾನ್ಸ್ ಲಿಮಿಟೆಡ್‌ಗೆ ಸಿಎಸ್‌ಆರ್‌ಗಾಗಿ ಗೋಲ್ಡನ್ ಪೀಕಾಕ್ ಪ್ರಶಸ್ತಿಯನ್ನು ನೀಡಲಾಯಿತು. == ಭಾರತದಲ್ಲಿರುವ ಶಾಖೆಗಳು == ಮುತ್ತೂಟ್ ಫೈನಾನ್ಸ್ - ಗೊಲ್ಡ್ ಲೋನ್ ಬೆಂಗಳೂರು ಮುತ್ತೂಟ್ ಫೈನಾನ್ಸ್ ಲಿಮಿಟಡ್ - ಬೆಂಗಳೂರು ಮುತ್ತೂಟ್ ಬ್ಯಾಂಕರ್ಸ್ - ಬೆಂಗಳೂರು ಮುತ್ತೂಟ್ ಫೈನಾನ್ಸ್ ಲಿಮಿಟಡ್ - ಉದಯಪುರ ರಾಜಸ್ಥಾನ ಮುತ್ತೂಟ್ ಫೈನಾನ್ಸ್ ಲಿಮಿಟಡ್ - ಧುರಿ, ಪಂಜಾಬ್ ಮುತ್ತೂಟ್ ಫೈನಾನ್ಸ್ ಕಾರ್ಪೊರೇಶನ್ - ತೆಲಂಗಾಣ == ಉಲ್ಲೇಖಗಳು ==